ಪುತ್ತೂರು: ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ.
ಈಶ್ವರಮಂಗಲ ಸಮೀಪದ ಮುಗುಳಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಉಮ್ಮರ್ ಸಿ.ಎಚ್(28) ಮೃತಪಟ್ಟವರು.
ಉಮ್ಮರ್ ಸಿ.ಎಚ್ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ತನ್ನ ಅಣ್ಣನ ಜೊತೆ ಬೆಂಗಳೂರಿಗೆ ತೆರಳಿದ್ದರು. ಎ.17ರಂದು ರಾತ್ರಿ ಬೆಂಗಳೂರಿನಿಂದ ಊರಿಗೆ ಬಸ್‌ನಲ್ಲಿ ಹೊರಟಿದ್ದ ಉಮ್ಮರ್ ಸಿ.ಎಚ್ ಅವರು ಬೆಳಿಗ್ಗೆ ಪುತ್ತೂರು ತಲುಪಿದ್ದರು. ಈ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗಾಗಲೇ ಅವರು ಮೃತ ಪಟ್ಟಿದ್ದರು ಎನ್ನಲಾಗಿದೆ.
ಮೃತರು ತಂದೆ, ತಾಯಿ ಝೈನಬಾ, ಸಹೋದರರಾದ ಹಮೀದ್ ಸಿ.ಎಚ್, ಯೂಸುಫ್ ಸಿ.ಎಚ್, ಅಝೀಝ್ ಸಿ.ಎಚ್, ಉಸ್ಮಾನ್ ಸಿ.ಎಚ್ ಹಾಗೂ ಅಲಿ ಸಿ.ಎಚ್ ರನ್ನು ಅಗಲಿದ್ದಾರೆ.