ಉಳ್ಳಾಲ : ಕೇರಳದಿಂದ ಮಂಗಳೂರಿಗೆ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ರಿಕ್ಷಾವೊಂದನ್ನು ಮಂಗಳೂರಿನ ಉಳ್ಳಾಲ ಕೊಣಾಜೆ ಪೊಲೀಸರು ಅಸೈಗೋಳಿಯಲ್ಲಿ ತಡೆದು ನಿಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ರಾಜ್ಯದ ಮಚ್ಚಂಪಾಡಿ ನಿವಾಸಿ ಮಹಮ್ಮದ್ ರಿಯಾಝ್ (32) ಬಂಧಿತ ಆರೋಪಿ.
ಆರೋಪಿ ರಿಯಾಝ್ ಕೇರಳದಿಂದ ಮಂಗಳೂರು ಭಾಗದಲ್ಲಿ ಮಾರಾಟ ಮಾಡಲು ಸುಮಾರು 365 ಕೆ.ಜಿ. ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ.
ಈ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಅಸೈಗೋಳಿ ಬಳಿ ಅಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ದನದ ಮಾಂಸ ಪತ್ತೆಯಾಗಿದೆ.
ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹಾಗೂ ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.