ಬೆಂಗಳೂರು: ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮಗು ಒಂದನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಆನೇಕಲ್ ತಾಲೂಕಿನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್ ಅವರು 10 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದ್ದಾರೆ.
ಲೋಕನಾಥ್ ಬಹದ್ದೂರ್ ಜೈಲು ಶಿಕ್ಷೆಗೆ ಒಳಗಾದ ಅಪರಾಧಿ.
ಏನಿದು ಪ್ರಕರಣ..?
ನೇಪಾಳಿ ಮೂಲದವನಾದ ಲೋಕನಾಥ್ ಬಹದ್ದೂರ್ 2017ರಲ್ಲಿ ಮಗುವನ್ನ ಕಿಡ್ನಾಪ್ ಮಾಡಿ ಅತ್ಯಾಚಾರ ನಡೆಸಿದ್ದ. ಅತ್ತಿಬೆಲೆಯಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡ್ತಿದ್ದ ಈತ, ಮನೆ ಎದುರು ಆಟವಾಡ್ತಿದ್ದ ಮಗುವಿಗೆ ಚಾಕೊಲೇಟ್ ಕೊಡಿಸೋದಾಗಿ ಪುಸಲಾಯಿಸಿ ಕರೆದೊಯ್ದಿದ್ದ.
ಅಲ್ಲಿಂದ ತನ್ನ ರೂಮಿಗೆ ಕರೆದುಕೊಂಡು ಹೋಗಿ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದ. ಇತ್ತ ಮಗು ಅಳೋದಕ್ಕೆ ಶುರುಮಾಡ್ತಿದ್ದಂತೆ ಮಗುವನ್ನ ಚೆನ್ನೈಗೆ ಕರೆದುಕೊಂಡು ಹೋಗಿದ್ದ. ಇತ್ತ ಮಗುವಿನ ಪೊಷಕರು ಅತ್ತಿಬೆಲೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಆರೋಪಿ ಜಾಡನ್ನ ಬೆನ್ನತ್ತಿದ ಪೊಲೀಸ್ರಿಗೆ ಆರೋಪಿ ಚೆನೈನಲ್ಲಿರೋದು ಗೊತ್ತಾಗಿತ್ತು.
ಚೆನ್ನೈನಲ್ಲಿ ನೇಪಾಳ ಮೂಲದವರಿಗೆ ಮಗುವನ್ನ ಕೊಟ್ಟಿದ್ದ. ನಂತರ ಬೆಂಗಳೂರಿಗೆ ಬಾರದೇ ಚೆನ್ನೈನಲ್ಲಿ ಅಡ್ಡಾಡಿಕೊಂಡಿದ್ದ ಲೋಕನಾಥ್ನನ್ನ ಅತ್ತಿಬೆಲೆ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್ & ಟೀಂ ಬಂಧಿಸಿತ್ತು.
ಸೈಂಟಿಫಿಕ್ ಎವಿಡೆನ್ಸ್ನಲ್ಲಿ ಆರೋಪಿ ಮಗುವಿನ ಮೇಲೆ ಅತ್ಯಾಚಾರ ಎಸಗಿರೋದು ಸಾಬೀತಾಗಿತ್ತು. ಕೃತ್ಯ ನಡೆದು ಐದು ವರ್ಷಗಳ ಸುದೀರ್ಘ ವಿಚಾರಣೆ ನಂತರ ಆರೋಪಿಗೆ 10 ವರ್ಷ ಸಜೆ ಹಾಗೂ ಐದು ಸಾವಿರ ದಂಡವನ್ನ ವಿಧಿಸಲಾಗಿದೆ.