ವಿಟ್ಲ: ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರು ಅಳಿಕೆ ಮತ್ತು ಕೇಪು ಗ್ರಾಮವನ್ನು ಸಂಪರ್ಕಿಸುವ ಮೈರ- ಎರುಂಬು ರಸ್ತೆ ಕಾಂಕ್ರೀಟಿಕರಣಕ್ಕೆ ಎಸ್.ಸಿ. ಕಾಲೋನಿ ರಸ್ತೆ ಅನುದಾನದಲ್ಲಿ 80 ಲಕ್ಷ ರೂ. ಅನ್ನು ಬಿಡುಗಡೆಗೊಳಿಸಿದ್ದು, ರಸ್ತೆ ಕಾಮಗಾರಿಯು ಆರಂಭಗೊಂಡಿದೆ.
ಆರಂಭಗೊಂಡ ರಸ್ತೆ ಕಾಮಗಾರಿಯನ್ನು ಪುಣಚ ಬಿ.ಜೆ.ಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್ ರವರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್ ಅಳಿಕೆ ಶಕ್ತಿ ಕೇಂದ್ರದ ಸಂಚಾಲಕ ಸದಾನಂದ ಶೆಟ್ಟಿ ಎರುಂಬು ಕೇಪು ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ ಬೆಡೆಮಾರ್ ಮತ್ತು ಪುರುಷೋತ್ತಮ ಗೌಡ ಕಲ್ಲಂಗಳ ಹಾಗೂ ಹಿರಿಯ ಕಾರ್ಯಕರ್ತರಾದ ವಿಠ್ಠಲ್ ಬಲ್ಲಾಳ್ ಉಪಸ್ಥಿತರಿದ್ದರು.