ಪುತ್ತೂರು: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದ್ದು, ಈ ಘಟನೆಯನ್ನು ಗಮನಿಸುತ್ತಾ ತೆರಳಿದ ಆಟೋ ರಿಕ್ಷಾ ನಿಲ್ಲಿಸಿದ್ದ ಮತ್ತೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಪುತ್ತೂರು ಮುಖ್ಯ ರಸ್ತೆಯ ನಿರಾಲ ಬಾರ್& ರೆಸ್ಟೋರೆಂಟ್ ಬಳಿ ನಡೆದಿದೆ.

ಪುತ್ತೂರು ಮುಖ್ಯ ರಸ್ತೆಯ ನಿರಾಲ ಬಾರ್& ರೆಸ್ಟೋರೆಂಟ್ ಬಳಿಯ ರಸ್ತೆಯಲ್ಲಿ ಆಟೋ ರಿಕ್ಷಾ ಮತ್ತು ಬೈಕ್ ಮಧ್ಯೆ ಡಿಕ್ಕಿಯಾಗಿತ್ತು. ಈ ಘಟನೆಯನ್ನು ಗಮನಿಸುತ್ತಾ ತೆರಳಿದ ಮತ್ತೊಂದು ಆಟೋ ರಿಕ್ಷಾ ಚಾಲಕ ನಿಲ್ಲಿಸಿದ್ದ ಮಗದೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ.
ಈ ಘಟನೆಯಿಂದಾಗಿ ಅಪಘಾತದ ಆತಂಕದಲ್ಲಿದ್ದ ಸಾರ್ವಜನಿಕರಲ್ಲಿ ಆತಂಕದ ಮಧ್ಯೆ ಹಾಸ್ಯದ ನಿರಳಾತೆ ದೊರೆತಂತಾಯಿತು.