ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ 12 ದಿನಗಳ ರಾಜ್ಯಮಟ್ಟದ ವಿಜ್ಞಾನ ಶಿಬಿರ ಯುರೇಕಾದ ಎಂಟನೇ ದಿನದ ಕಾರ್ಯಕ್ರಮದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಭೌತ ವಿಜ್ಞಾನಿ ಡಾ. ಎ.ಪಿ. ಭಟ್ ಮತ್ತು ಪೂರ್ಣಪ್ರಜ್ಞ ಅಮಚ್ಯುರ್ ಖಗೋಳ ಕ್ಲಬ್‌ನ ಸಂಯೋಜಕ ಅತುಲ್ ಭಟ್ ರವರಿಂದ ಬಾಹ್ಯಾಕಾಶ ಕೌತುಕಗಳು, ಗ್ಯಾಲಕ್ಸಿ ಮತ್ತು ಸೌರಕಲೆಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ ಪೂಜಾಶ್ರೀ ನಿರ್ವಹಿಸಿದರು.