ಪುತ್ತೂರು: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ಜಾತ್ರೋತ್ಸವ ಹಾಗೂ ನೇಮೋತ್ಸವ ಎ.30 ರಂದು ನಡೆಯಲಿದೆ.
ಎ.30 ರಂದು ಬೆಳಿಗ್ಗೆ ವಿವಿಧ ಕಡೆಗಳಿಂದ ಸಂಗ್ರಹವಾದ ಹಸಿರು ಹೊರ ಕಾಣಿಕೆಯು ವಿನಾಯಕ ನಗರ ದ್ವಾರದಿಂದ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನ ತಲುಪಲಿದೆ. ನಂತರ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನಾ ಸೇವೆ ಜರಗಲಿದೆ.
ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ವಾಚನ, ಪಂಚವಿಂಶತಿ ಕಲಶ ಪೂಜೆ, ಮಹಾಗಣಪತಿ ಹೋಮ, ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ ಲಲಿತ ಸಹಸ್ರನಾಮ ಪಾರಾಯಣ, ದೈವಗಳ ಭಂಡಾರ ತೆಗೆಯುವುದು, ರಾತ್ರಿ ಶ್ರೀ ದೇವಿಗೆ ರಂಗಪೂಜೆ, ಬಳಿಕ ಶ್ರೀ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ಧರ್ಮ ದೈವಗಳ ನೇಮೋತ್ಸವ ನಡೆಯಲಿದೆ.