ಕಾಸರಗೋಡು: ಸುಮಾರು 10 ಲಕ್ಷ ರೂ.ಮೌಲ್ಯದ ಎಂ.ಡಿ.ಎಂ.ಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಡಿ ವೈ ಎಸ್ಪಿ. ವಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾಸರಗೋಡು ರೈಲ್ವೆ ನಿಲ್ದಾಣ ಸಮೀಪದ ನಿವಾಸಿ ಹವಾಜ್ ಕೆ. ಪಿ (28) ಎನ್ನಲಾಗಿದೆ.

ಹವಾಜ್ ದೆಹಲಿಯಿಂದ ಮಾದಕ ವಸ್ತುವನ್ನು ಕಾಸರಗೋಡಿಗೆ ತಲಪಿಸುವ ಜಾಲದ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ.