ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2020-21ನೇ ಸಾಲಿನ ಬಿ.ಎಡ್. ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನ ಮೋನಿಕಾ ಪ್ರಿಯಾ ಡಿಸೋಜಾ ರವರು 85.66% ದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಇವರು ಸಾಮೆತ್ತಡ್ಕ ನಿವಾಸಿ ಪ್ರೀತಮ್ ಮಾಸ್ಕರೇನ್ಸ್ ರವರ ಪತ್ನಿಯಾಗಿದ್ದಾರೆ.
ಬಿ.ಎಡ್ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿಗೆ ಶೇಕಡಾ ನೂರು ಫಲಿತಾಂಶ ಬಂದಿದ್ದು, ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 46 ಪ್ರಶಿಕ್ಷಣಾರ್ಥಿಗಳು ಹಾಜರಾಗಿದ್ದು, 46 ಪ್ರ.ಶಿಕ್ಷಣಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ.