ಮಂಗಳೂರು: ಯುವಕನೊಬ್ಬನನ್ನು ತಂಡವೊಂದು ಕೊಲೆಗೈದ ಘಟನೆ ನಗರದ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ರೌಡಿ ಶೀಟರ್ ರಾಹುಲ್ ಹೊಯ್ಗೆ ಬಜಾರ್ ಎಂದು ಗುರುತಿಸಲಾಗಿದೆ.
ಎಮ್ಮೆಕೆರೆ ಬಳಿ ಕೋಳಿ ಅಂಕ ನಡೆಯುತ್ತಿದ್ದು ಅದನ್ನು ವೀಕ್ಷಿಸಲು ಆಗಮಿಸಿದ್ದ ರಾಹುಲ್ ನನ್ನು ನಾಲ್ವರು ದುಷ್ಕರ್ಮಿಗಳ ತಂಡ ಅಟ್ಟಿಸಿಕೊಂಡು ಬಂದು ಮೈದಾನದ ಬಳಿ ಬರ್ಬರವಾಗಿ ಕಡಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ರಾಹುಲ್ ಹೊಯ್ಗೆಬಜಾರ್ ನಿವಾಸಿಯಾಗಿದ್ದು ಪಾಂಡೇಶ್ವರ ಠಾಣೆಯಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದು, ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿರುಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.