ವಿಟ್ಲ: ರಾಜ್ಯದಲ್ಲಿ ಇತ್ತೀಚೆಗೆ ದ್ವೇಷದ ವಾತಾವರಣ ಹೆಚ್ಚಾಗುತ್ತಿದ್ದು, ದಿನಬೆಳಗಾದಂತೆ ಬಹಿಷ್ಕಾರ, ದ್ವೇಷದ ಸುದ್ದಿಗಳಿಗೆ ಜನರು ನೊಂದು ಹೋಗಿದ್ದಾರೆ. ಈ ಮಧ್ಯೆ ಕೆಲವೊಂದು ಕಡೆಗಳಲ್ಲಿ ಸೌಹಾರ್ದ ಸಂದೇಶ ಸಾರುವ ಸುದ್ದಿಗಳೂ ವರದಿಯಾಗುತ್ತಿವೆ. ಅಂಥ ಒಂದು ಸುದ್ದಿ ವಿಟ್ಲದಿಂದಲೂ ವರದಿಯಾಗಿದೆ.

ವಿಟ್ಲ ಸಮೀಪದ ಕಡಂಬು ಮಸೀದಿಯಲ್ಲಿ ಮುಸ್ಲಿಮೇತರ ಸಹೋದರರು ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಜನರ ಪ್ರಶಂಸೆಗೆ ಕಾರಣರಾಗಿದ್ದಾರೆ..
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಜನಾರ್ಧನ ಪೂಜಾರಿ ಮತ್ತು ಅಣ್ಣ-ತಮ್ಮಂದಿರಾದ ಹರೀಶ್ ಗೌಡ ಮತ್ತು ಮೋಹನ ಗೌಡ ಮುಸ್ಲಿಮ್ ಸಮುದಾಯದವರಿಗೆ ಇಫ್ತಾರ್ ಏರ್ಪಡಿಸಿದ್ದಲ್ಲದೆ ತಾವೂ ಭಾಗವಹಿಸಿ ‘ಏನೇ ಆಗಲಿ ನಾವೆಲ್ಲ ಒಂದೇ’ಎಂದು ಸಮಾಜಕ್ಕೆ ಸೌಹಾರ್ದ ಸಂದೇಶ ಸಾರಿದ್ದಾರೆ. ಎ.25 ರಂದು ಜನಾರ್ಧನ ಪೂಜಾರಿ ಹಾಗೂ ಎ.26 ರಂದು ಮೋಹನ ಗೌಡ ಮತ್ತು ಹರೀಶ್ ಗೌಡ ಇಫ್ತಾರ್ ಕೂಟ ಏರ್ಪಡಿಸಿದ್ದರು.