ಮಂಗಳೂರು: ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಘಟಕ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ(ರಿ) ಮಂಗಳೂರು ಹಾಗೂ ಪಣಂಬೂರು ಮೊಗವೀರ ಮಹಾಸಭಾ, ಚಿತ್ರಾಪುರ, ಕುಲಾಯಿ ಇದರ ಸಂಯುಕ್ತ ಆಶ್ರಯದಲ್ಲಿ ‘ಶ್ರಮಿಕರ ಸಂಭ್ರಮದ ಕ್ರೀಡಾಕೂಟ’ ಎ.30 ಮತ್ತು ಮೇ.1 ರಂದು ಚಿತ್ರಾಪುರ ಮೊಗವೀರ ಮಹಾಸಭಾ ಮೈದಾನದಲ್ಲಿ ನಡೆಯಲಿದೆ.
ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ, ಕರ್ನಾಟಕ ಸ್ಟೇಟ್ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಛೇರ್ಮನ್ ಆಗಿರುವ ರಾಕೇಶ್ ಮಲ್ಲಿಯವರ ಸಾರಥ್ಯದಲ್ಲಿ ನಡೆಯುವ ಎರಡು ದಿನದ ಈ ಕ್ರೀಡಾಕೂಟದಲ್ಲಿ ಶ್ರಮಿಕ ವರ್ಗದ ಬಂಧುಗಳಿಗಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜನಪ್ರತಿನಿಧಿಗಳು, ಪ್ರಮುಖ ನಾಯಕರು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.