ನವದೆಹಲಿ: ಕೊರೊನಾ ವೈರಸ್ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ದೇಶದಲ್ಲಿ ವಿಧಿಸಿದ ಲಾಕ್ಡೌನ್ಗೆ ಇಂದು ಒಂದು ವರ್ಷ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದ ಪರಿಣಾಮ ವೈರಸ್ ಹರದಡಂತೆ ತಡೆಯಲು ಜನರನ್ನು ಮನೆಯಲ್ಲಿರಿಸುವಂತೆ ಕಳೆದ ವರ್ಷ ಮಾರ್ಚ್ 23 ರಂದು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಜಾರಿಗೆ ತಂದಿತ್ತು.
4 ಹಂತಗಳಲ್ಲಿ ಪ್ರಧಾನಿ ಮೋದಿ ದೇಶಾದ್ಯಂತ ಲಾಕ್ಡೌನ್ ಜಾರಿಗೆ ತಂದಿದ್ದರು. ಆದ್ರೆ ಈ ಲಾಕ್ಡೌನ್ನಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿತ್ತು. ಅಲ್ಲದೆ ಬೇರೆ ಊರಿಗೆ ವಲಸೆ ಬಂದಿದ್ದ ಬಡ ಕಾರ್ಮಿಕರು ತಮ್ಮ ಊರಿಗೆ ಹೋಗಲು ಪರದಾಡಿದ್ದರು. ಬಳಿಕ ಹಂತಹಂತವಾಗಿ ಲಾಕ್ಡೌನ್ ತೆರವು ಮಾಡಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದ್ರೆ ಇಂದಿಗೂ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರೆಸಿವೆ. ಅಂತರಾಷ್ಟ್ರೀಯ ಶೆಡ್ಯೂಲ್ಡ್ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧ ಕೂಡ ಹಾಗೇ ಇದೆ.
ಕೊರೊನಾ ಪ್ರಕರಣಗಳು ತಗ್ಗುತ್ತಿವೆಯಾದ್ರೂ, ಸಂಪೂರ್ಣ ಮರೆಯಾಗಿಲ್ಲ. ಇನ್ನು ಹಲವು ಕೊರೊನಾ ಲಸಿಕೆಗಳನ್ನ ಅಭಿವೃದ್ಧುಪಡಿಸಲಾಗಿದ್ದು, ಭಾರತ ಸೇರಿದಂತೆ ಅನೇಕ ದೇಶಗಳು ವ್ಯಾಕ್ಸಿನೇಷನ್ ಕಾರ್ಯಕ್ರಮ ನಡೆಸುತ್ತಿವೆ.