ಕಡಬ: ಕೆಲಸ ಯುವಕನೋರ್ವ ಸಾಕು ದನವನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ತಂಡವೊಂದು ಆತನ ಮೇಲೆ ದಾಳಿ ನಡೆಸಿದ್ದು, ಹಲ್ಲೆ ಬಿಡಿಸಲು ತೆರಳಿದ ಮಾಲಕಿ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿ ಮಹಿಳೆಯೋರ್ವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಡಬ ತಾಲೂಕು ಕೌಕ್ರಾಡಿ ಮಣ್ಣಗುಂಡಿ ನಿವಾಸಿ ಮಹಿಳೆಯೋರ್ವರು ಮಹೇಶ್ ಮತ್ತು ಇತರ ಮೂವರ ವಿರುದ್ಧ ದೂರು ನೀಡಿದ್ದಾರೆ.
ಮಹಿಳೆಯ ಮನೆಯ ಕೆಲಸದ ಯುವಕನೋರ್ವ ಸಾಕು ದನವನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆತನನ್ನು ತಡೆಗಟ್ಟಿ ಮೂವರು ಹಲ್ಲೆ ನಡೆಸಿದ್ದು, ಈ ಬಗ್ಗೆ ಮಾಹಿತಿ ತಿಳಿದ ಮಹಿಳೆ ಆಟೋ ರಿಕ್ಷಾದಲ್ಲಿ ಸ್ಥಳಕ್ಕೆ ತೆರಳಿದಾಗ ಹಲ್ಲೆ ನಡೆಸುತ್ತಿದ್ದವರಲ್ಲಿ ಓರ್ವ ವ್ಯಕ್ತಿ ಮಹಿಳೆಯ ಮೇಲೂ ಹಲ್ಲೆ ನಡೆಸಿದ್ದು, ಯಾವುದೋ ಚೈನ್ ನಿಂದ ಮಹಿಳೆಯ ತೋಳಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 54/2022 ಕಲಂ: 341 323 324 354 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿದೆ.