ಬೆಳ್ತಂಗಡಿ: ಆರ್. ಎಸ್.ಎಸ್. ಕಾರ್ಯಕರ್ತ ಬೆಳ್ತಂಗಡಿ ತಾಲೂಕು ಶಿಶಿಲ ನಾಗನಡ್ಕ ನಿವಾಸಿ ಸೂರ್ಯ ನಾರಾಯಣ ರಾವ್ ರವರು ಎ.30 ರಂದು ನಿಧನರಾದರು.

ಸೂರ್ಯ ನಾರಾಯಣ ರಾವ್ ರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿದ್ದು, ವಿವಿಧ ಧಾರ್ಮಿಕ ಕೆಲಸ ಕಾರ್ಯದಲ್ಲಿ ಜವಾಬ್ದಾರಿ ನಿರ್ವಹಿಸಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.