ಯಶ್ ವೃತ್ತಿಜೀವನದ ದಿಕ್ಕೆನ್ನೇ ಬದಲಿಸಿದ `ಕೆಜಿಎಫ್ 2′ ಸಿನಿಮಾ. ದಿನದಿಂದ ದಿನಕ್ಕೆ ಹೈಪ್ ಕ್ರಿಯೇಟ್ ಮಾಡ್ತಿದೆ. ಇದುವರೆಗೂ ಕನ್ನಡ ಚಿತ್ರ ಮಾಡಿರದ ದಾಖಲೆ ರಾಕಿಭಾಯ್ ಸಿನಿಮಾ ಮಾಡಿದೆ. ಬರೋಬ್ಬರಿ ಒಂದು ಸಾವಿರ ಕೋಟಿ ಕಲೆಕ್ಷನ್ ಮಾಡೋ ಮೂಲಕ ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ.
ಎಲ್ಲೆಲ್ಲೂ ಕೆಜಿಎಫ್ 2′ ಹಬ್ಬ ಜೋರಾಗಿದೆ. ಸಿನಿಮಾ ರಿಲೀಸ್ 2 ವಾರ ಕಳೆದರು ರಾಕಿಭಾಯ್ ಖದರ್ ಮಾತ್ರ ಕಮ್ಮಿಯಾಗಿಲ್ಲ. ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಹಿಂದಿ ಸಿನಿಮಾಗಳೇ ಮಾಡಿರದ ದಾಖಲೆಯನ್ನ
ಕೆಜಿಎಫ್ 2′ ಸಿನಿಮಾ ಮಾಡಿದೆ. ಇದೀಗ ಬಾಕ್ಸ್ಆಫೀಸ್‌ನಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದೆ.
ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಎಲ್ಲೆಲ್ಲಿ ಎಷ್ಟು ಕಲೆಕ್ಷನ್ ಅಂತಾ ನೋಡೋದಾದ್ರೆ, ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ. ಪ್ರಸ್ತುತ ಹಿಂದಿ ಬಾಕ್ಸ್‌ಆಪೀಸ್‌ನಲ್ಲಿ 353.06 ಕೋಟಿ ಬಾಚಿದೆ.ಈ ಮೂಲಕ ಬಾಕ್ಸ್ಆಫೀಸ್ ನರಾಚಿ ಅಧಿಪತಿಯ ಸುಂಟರಗಾಳಿ ಓಟ ಮುಂದುವರೆದಿದೆ. ರಾಕಿಭಾಯ್ ಇಂಡಿಯನ್ ಸಿನಿಮಾ ಬಾಕ್ಸ್ಆಫೀಸ್‌ನ ಮಾನ್‌ಸ್ಟಾರ್ ಮುನ್ನುಗ್ಗುತ್ತಿದ್ದಾರೆ. ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ಚಿತ್ರಕ್ಕೆ ಫಿದಾ ಆಗಿರೋ ಅಭಿಮಾನಿಗಳು ಕೆಜಿಎಫ್ 3ಗಾಗಿ ಎದುರು ನೋಡ್ತಿದ್ದಾರೆ.