ಪುತ್ತೂರು: ಸೂತ್ರಬೆಟ್ಟುವಿನಲ್ಲಿ ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವವು ಮೇ.1 ರಂದು ನಡೆಯಲಿದೆ.
ಮೇ.1 ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ. ಮೂ. ಎ. ವಸಂತ ಕುಮಾರ್ ಕೆದಿಲಾಯ ರವರ ನೇತೃತ್ವದಲ್ಲಿ ಗಣಪತಿ ಹೋಮ ಮತ್ತು ರಕ್ತೇಶ್ವರಿಗೆ ತಂಬಿಲ ಸೇವೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವ ನೆರವೇರಲಿದೆ.