ಮಂಗಳೂರು: ನಾಲ್ಕನೇ ಮಹಡಿಯಿಂದ ವಿದ್ಯಾರ್ಥಿಯೊಬ್ಬ ಬಿದ್ದು ಮೃತಪಟ್ಟ ಘಟನೆ ಮೇ.04 ರಂದು ಸಂಜೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಮೂಲತಃ ಬಿಜಾಪುರದ ಸತೀಶ್ ಎಂಬವರ ಪುತ್ರ ಪ್ರಣವ್ ಎಸ್. ಮುಂಡಾಸ್ (17) ಎಂದು ಗುರುತಿಸಲಾಗಿದೆ.

ಪ್ರಣವ್ ಕೊಟ್ಟಾರ ಚೌಕಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸಿಸುತ್ತಿದ್ದು , ಇತರ ಮಕ್ಕಳೊಂದಿಗೆ ಸಂಜೆ ವೇಳೆ ಕ್ರಿಕೆಟ್ ಆಡುತ್ತಿದ್ದು, ಈ ವೇಳೆ ಹಾಸ್ಟೆಲ್ ಕಟ್ಟಡದ ಮೇಲ್ಗಡೆ ಬಾಲ್ ಬಿತ್ತನ್ನೆಲಾಗಿದೆ.
ಕಟ್ಟಡದ ನಾಲ್ಕನೆ ಮಹಡಿಯಲ್ಲಿದ್ದ ಪ್ರಣವ್ ಅದನ್ನು ಹೆಕ್ಕುವ ಸಲುವಾಗಿ ಮಹಡಿಗೆ ಅಳವಡಿಸಲಾದ ಶೀಟ್‌ಗೆ ಏರಿದ್ದು, ಈ ಸಂದರ್ಭ ಬಿದ್ದು ಗಂಭೀರ ಗಾಯಗೊಂಡಿದ್ದು ತಕ್ಷಣವೇ ಆತನನ್ನು ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.