ವಿಟ್ಲ: ದಾನ ಮಾಡುವುದು ಗುಣವನ್ನು ಬೆಳೆಸಿಕೊಳ್ಳುವಂತಹದ್ದು, ಜೀವಿತಾವಧಿಯಲ್ಲಿ ಪ್ರತಿ ವ್ಯಕ್ತಿ, ಮಾನವರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ನೀಡಿರುವ ಪುಸ್ತಕದ ಸದುಪಯೋಗವನ್ನು ಬಳಸಿಕೊಂಡು ಶಿಕ್ಷಣವನ್ನು ಪೂರೈಸಿಕೊಂಡಾಗ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುರುವ ನಡುಮನೆ ಮಹಾಬಲ ಭಟ್ ಹೇಳಿದರು.

ಅವರು ಮಾತೃಭೂಮಿ ಯುವ ವೇದಿಕೆ (ರಿ.), ಮಾಣಿಲ ಸಹಕಾರ ಹಾಗೂ ಸಿಂತ್ಯಾ ವೇರೂ ಡಿ’ ಸೋಜ ಮಂಗಳೂರು ಇವರು ಪ್ರಾಯೋಜಕತ್ವದಲ್ಲಿ ಮಾಣಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮುರುವ ಇಲ್ಲಿನ ವಿದ್ಯಾರ್ಥಿಗಳಿಗೆ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಉಚಿತ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ಉಚಿತ ಪುಸ್ತಕವನ್ನು ಕೊಡುಗೆಯಾಗಿ ನೀಡಿದ ಮಂಗಳೂರಿನ ಸಿಂತ್ಯಾ ವೇರೂ ಡಿ ಸೋಜ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಿಂತ್ಯಾ ವೇರೂ ಡಿ ಸೋಜ ಅವರನ್ನು ಮಾತೃಭೂಮಿ ಯುವ ವೇದಿಕೆ (ರಿ.), ಮಾಣಿಲ ಇದರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ದಯಾನಂದ ನಾಯಕ್ ಪಿ., ಮಾತೃಭೂಮಿ ಯುವ ವೇದಿಕೆಯ ಅಧ್ಯಕ್ಷರಾದ ರಂಜಿತ್ ಕುಮಾರ್ ದಂಡೆಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾತೃಭೂಮಿ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿತ್ ಕುಮಾರ್ ಯಂ. ಸ್ವಾಗತಿಸಿ, ಮಿಥುನ್ ಕುಮಾರ್ ಕೋಂಕೋಡು ವಂದಿಸಿದರು. ಸುದೇಶ್ ಮಾಣಿಲ ಪ್ರಾಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು.

