ವಿಟ್ಲ: ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರ ಸ್ಕಂದಗಿರಿ ನೆಕ್ಕಿತ್ತಪುಣಿ ಇದರ ಪ್ರತಿಷ್ಠಾವರ್ಧಂತ್ಯುತ್ಸವ ಗಣಹವನ, ಶ್ರೀ ಸುಬ್ರಹ್ಮಣ್ಯ ಕಲ್ಪೋಕ್ತ ಪೂಜೆ ಹಾಗೂ ಭಜನಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಶ್ರೀಸ್ಕಂದ ಕಲಾವೃಂದ ಅಳಿಕೆ ಆಶ್ರಯದ ಶ್ರೀಸ್ಕಂದ ಕುಣಿತ ಭಜನಾ ತಂಡದ ಉದ್ಘಾಟನೆ ನೆರವೇರಿತು.
ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ನಾರಾಯಣ ನೆಕ್ಕಿತ್ತಪುಣಿ, ಕಾರ್ಯದರ್ಶಿ ಸದಾಶಿವ ಅಳಿಕೆ, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಜತೆಕಾರ್ಯದರ್ಶಿ ನಿತ್ಯಾನಂದ ಪೂಜಾರಿ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿ ಸದಾಶಿವ ಶೆಟ್ಟಿ, ಭಜನಾಮಂಡಳಿ ಅಧ್ಯಕ್ಷ ಪೂವಪ್ಪಗೌಡ, ಸದಸ್ಯರಾದ ಚಂದ್ರಹಾಸ, ತಿಲಕನಾಥ, ಅವಿನಾಶ್, ಹರೀಶ್ ಕಲ್ಲಜೇರ, ಪ್ರಣಾಮ್, ದಿವಾಕರ ಶೆಟ್ಟಿ, ರವಿ, ಪರಮೇಶ್ವರ, ಗೌತಮ್, ಶಿವರಾಮ ಮೊದಲಾದವರು ಉಪಸ್ಥಿತರಿದ್ದರು.
