ಸುಳ್ಯ: ಮೊಬೈಲ್ ಬಳಸುವ ವಿಚಾರಕ್ಕೆ ತಾಯಿ ಬುದ್ದಿಮಾತು ಹೇಳಿದ್ದರಿಂದ ಮನೆಯಿಂದ ಹೊರಹೋಗಿರುವ 16 ವರ್ಷದ ಬಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಹಾಗೂ ಪ್ರಸ್ತುತ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ನಿವಾಸಿ ಸಲ್ಮಾ (40) ಅವರು ನೀಡಿದ ದೂರಿನ ಪ್ರಕಾರ, ಮೇ 30ರಂದು ಬೆಳಿಗ್ಗೆ ತಮ್ಮ ಮಗ ಸೈಯದ್ ಆಲಿ ಸೈಯದ್ ಗೌಸ್ (16) ಮೊಬೈಲ್ ನೋಡುತ್ತಿದ್ದ ವಿಚಾರಕ್ಕೆ ಬೈದು ಬುದ್ದಿಮಾತು ಹೇಳಿದ್ದಾರೆ. ಇದಾದ ಬಳಿಕ ಬಾಲಕ ಮನೆಯಿಂದ ಹೊರಹೋಗಿದ್ದು, ಮರಳಿ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕನನ್ನು ಆತನ ಸ್ನೇಹಿತರು, ಸಂಬಂಧಿಕರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 73/2026, ಕಲಂ 137(2) ಬಿಎನ್‌ಎಸ್-2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




























