ಪುತ್ತೂರು: ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಮೇ.4 ರಂದು ನಡೆದಿದ್ದು, ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಸಹಸವಾರ ಚಿಕಿತ್ಸೆ ಫಲಕಾರಿಯಾಗದೆ ಮೇ.5 ರಂದು ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದ್ದು, ಈ ಬಗ್ಗೆ ಕುಟುಂಬ ಮೂಲಗಿಂದಲೂ ಗೊಂದಲಮಯ ಉತ್ತರಗಳು ದೊರಕುತ್ತಿವೆ.
ಅರ್ಯಾಪು ನೆಕ್ರಾಜೆ ನಿವಾಸಿ ಹಸೈನಾರ್ ಅವರ ಪುತ್ರ ಮಹಮ್ಮದ್ ಆಸೀರ್(17) ಗಂಭೀರಗಾಯಗೊಂಡ ಯುವಕ.

ನಿನ್ನೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಆಸೀರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಇಂದು ಬೆಳಗ್ಗೆ ವೈದ್ಯರು ಸಂಬಂಧಿಕರೋರ್ವರ ಬಳಿ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದು, ಆಕ್ಸಿಜನ್ ಅನ್ನು ತೆಗೆದರೆ ಜೀವಕ್ಕೆ ಅಪಾಯವಿದೆ ಎಂದಿದ್ದು, ಈ ಬಗ್ಗೆ ಸರಿಯಾಗಿ ತಿಳಿಯದೆ ಯುವಕ ಮೃತ ಪತ್ತಿದ್ದನೇನೆಂದು ಪ್ರಚಾರ ಮಾಡಿದರೆನ್ನಲಾಗಿದೆ.
ಈಗ ಯುವಕನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣುತ್ತಿದೆ ಎನ್ನಲಾಗಿದೆ.