ಪುತ್ತೂರು: ಪತ್ರಿಕಾಗೋಷ್ಠಿ ಕರೆದು ಬಿಜೆಪಿ ಪಕ್ಷದ ಬಗ್ಗೆ ಇಲ್ಲದ ಸಲ್ಲದ ಆರೋಪ ಮಾಡಿ, ಜನರಲ್ಲಿ ದ್ವೇಷದ ಭಾವನೆಗಳು ಮೂಡುವ ರೀತಿಯಲ್ಲಿ ನಿರಾಧಾರಿತ ಸುಳ್ಳು ಅಪಾದನೆ ಮಾಡಿರುವುದಾಗಿ ಆರೋಪಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ರವರು ಪುತ್ತೂರು ನಗರ ಪೊಲೀಸ್ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಅಮಲ ರಾಮಚಂದ್ರ, ರಮಾನಾಥ ವಿಟ್ಲ, ಮೌರಿಸ್ ಮಸ್ಕರೇಸನ್, ಅಶ್ರಫ್ ವಿಟ್ಲ, ಕೇಶವ ಪಡೀಲ್ ರವರ ವಿರುದ್ಧ ಠಾಣೆಯಲ್ಲಿ ದೂರು ನೀಡಲಾಗಿದೆ.
ಮೇ.2 ರಂದು ಪತ್ರಿಕಾಗೋಷ್ಠಿ ಕರೆದು ನಿರಾಧಾರಿತ ಸುಳ್ಳು ಅಪಾದನೆಗಳನ್ನು ಮಾಡಿದ್ದು, ಭಾರತೀಯ ಜನತಾ ಪಾರ್ಟಿ ವಿರುದ್ಧ ಜನರಲ್ಲಿ ದ್ವೇಷ ಭಾವನೆಗಳು ಮೂಡುವ ರೀತಿಯಲ್ಲಿ ಹಲವಾರು ನಿರಾಧಾರಿತ ಸುಳ್ಳು ಅಪಾದನೆಗಳನ್ನು ಮಾಡಿರುತ್ತಾರೆ.
ಕಂದಾಯ ಇಲಾಖೆಯಿಂದ ಬಿಜೆಪಿ ಕಚೇರಿಗೆ ಮಾಮೂಲು ಸಂದಾಯ ಆಗುತ್ತದೆ ಎಂದು ಅಪಾದಿಸಿರುತ್ತಾರೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಜನರಲ್ಲಿ ಭಾರತೀಯ ಜನತಾ ಪಾರ್ಟಿಯ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ಮಾಡಿದ್ದು, ಸದ್ರಿ ಪತ್ರಿಕಾಗೋಷ್ಟಿಯ ಸಂಗತಿಗಳು ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವಂತೆ ಮಾಡಿದ್ದು, ಇದು ಪಕ್ಷಕ್ಕೆ ಮುಜುಗರ ಉಂಟುಮಾಡಿ, ಪಕ್ಷದ ಗೌರವಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಯಾವುದೇ ಪುರಾವೆಗಳಿಲ್ಲದೆ ಸುಳ್ಳು ಅಪಾದನೆಗಳನ್ನು ಮಾಡಿದ ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.