ಮೈಸೂರು: ರಂಜಾನ್ ಮೆರವಣಿಗೆ ವೇಳೆ ನಂಜನಗೂಡಿನಲ್ಲಿ ಉರ್ದುವಿನಲ್ಲಿ ನಮ್ಮ ಗ್ರಾಮ “ಕವಲಂದೆ ಮಿನಿ ಪಾಕಿಸ್ತಾನ್” ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ವಿವಾದಕ್ಕೂ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಅನಾನ್ ಅಲಿ ಖಾನ್(23), ಫಯಾಜ್ ಖಾನ್(21) ಎನ್ನಲಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ನಡೆದ ರಂಜಾನ್ ಮೆರವಣಿಗೆ ಸಂದರ್ಭ ಈ ಘಟನೆ ನಡೆದಿದ್ದು, ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಇಂತಹ ಹೇಳಿಕೆ ನೀಡಿರುವರನ್ನು ಬಂಧಿಸಿ ದೇಶದ್ರೋಹದ ಕೇಸ್ ದಾಖಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಪರ ಸಂಘಟನೆಗಳ ಆಗ್ರಹ ವ್ಯಕ್ತವಾಗಿತ್ತು. ದೊಡ್ಡ ಕವಲಂದೆಯಲ್ಲಿ ರಂಜಾನ್ ಹಬ್ಬದ ದಿನ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ತೆರಳುವಾಗ ಈ ಘೋಷಣೆ ಕೂಗಲಾಗಿತ್ತು.
ಮೆರವಣಿಗೆ ಹೋಗುವುದನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಆಗ ನಮ್ಮ ಗ್ರಾಮ ಕವಲಂದೆ ಮಿನಿ ಪಾಕಿಸ್ತಾನ್ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.