ವಿಟ್ಲ: ಪತ್ನಿ ಮನೆಗೆ ತೆರಳಿದ್ದ ವೇಳೆ ಹೃದಯಾಘಾತವಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೇ.5 ರಂದು ರಾತ್ರಿ ನಡೆದಿದೆ.
ಮೃತರನ್ನು ವಿಟ್ಲ ಕಂಬಳಬೆಟ್ಟು ಸಮೀಪದ ನೆಕ್ಕರೆ ನಿವಾಸಿ ಅಶ್ರಫ್(35) ಎನ್ನಲಾಗಿದೆ.

ಅಶ್ರಫ್ ನಿನ್ನೆ ಸಂಜೆ ಪತ್ನಿಯ ಮನೆಗೆ ತೆರಳಿದ್ದು, ಅಲ್ಲಿ ರಾತ್ರಿ ವಿಪರೀತ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತದಿಂದಾಗಿ ಮೃತಪಟ್ಟರೆನ್ನಲಾಗಿದೆ.