ವಿಟ್ಲ: ಸೇರಾಜೆ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ರುದ್ರಚಾಮುಂಡಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗರಾಜ ದೈವಗಳ ನೇಮೋತ್ಸವವು ಮೇ.10-11 ರಂದು ನಡೆಯಲಿದೆ.
ಮೇ.10 ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ ನಡೆಯಲಿದೆ. ಸಂಜೆ ಭಂಡಾರ ತೆಗೆದು, ಅನ್ನಸಂತರ್ಪಣೆಯ ಬಳಿಕ ದೈವಗಳ ನೇಮೋತ್ಸವ ನಡೆಯಲಿದೆ.
ಮೇ.11 ರಂದು ಸಂಜೆ ತಂಬಿಲ ಸೇವೆ ನಡೆಯಲಿದೆ.