ಪುತ್ತೂರು: ‘ಅಭಿರಾಮ್ ಫ್ರೆಂಡ್ಸ್’ ಪುತ್ತೂರು ಪ್ರಸ್ತುತ ಪಡಿಸುವ ಎಂಟು ತಂಡಗಳ ಓವರ್ ಆರ್ಮ್ ಫುಲ್ ಗ್ರೌಂಡ್ ಕ್ರಿಕೆಟ್ ಟೂರ್ನ್ ಮೆಂಟ್ ‘ಪುತ್ತೂರು ಪ್ರಿಮೀಯರ್ ಲೀಗ್-2022’ ಸೀಸನ್-4 ಮೇ.7-8 ರಂದು ಕೊಂಬೆಟ್ಟು ಜೂನಿಯರ್ ಕಾಲೇಜ್ ಗ್ರೌಂಡ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಸಭೆ ಅಧ್ಯಕ್ಷರಾದ ಜೀವಂಧರ್ ಜೈನ್ ರವರು ನೆರವೇರಿಸಲಿದ್ದಾರೆ. ಅಭಿರಾಮ್ ಫ್ರೆಂಡ್ಸ್(ರಿ.) ಪುತ್ತೂರು ಇದರ ಅಧ್ಯಕ್ಷರಾದ ನವೀನ್ ರೈ ಪಂಜಳ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದೀಪಕ್ ಕುಮಾರ್ ಮಂಗಳೂರು, ನಗರ ಸಭೆ ಸಹಾಯಕ ಕಾರ್ಯಪಾಲಕರಾದ ಅರುಣ್ ಕೆ, ಪುತ್ತೂರು ವಿಭಾಗದ ಮೆಸ್ಕಾಂ ಎ.ಇ. ರಾಜೇಶ್, ಹಿಂದೂ ಯುವಸೇನೆ ವಿಟ್ಲ ಇದರ ಅಧ್ಯಕ್ಷರಾದ ರಘುಪತಿ ಪೈ ರವರು ಆಗಮಿಸಲಿದ್ದಾರೆ.
ಮೇ.8 ರಂದು ಸಂಜೆ 6 ಗಂಟೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ ರವರು ವಹಿಸಲಿದ್ದಾರೆ.
ಬಹುಮಾನ ವಿತರಣೆಯನ್ನು ಪ್ರಿಯದರ್ಶಿನಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ದಿವ್ಯಪ್ರಭ ಚಿಲ್ತಡ್ಕ ರವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯರಾದ ರಿಯಾಜ್ ಪರ್ಲಡ್ಕ, ಉದ್ಯಮಿಗಳಾದ ರೋಶನ್ ರೈ ಬನ್ನೂರು, ಉದ್ಯಮಿಗಳಾದ ಸುರೇಶ್ ಪೂಜಾರಿ ಅಳದಂಗಡಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಬಂಗೇರ, ವಿಟ್ಲ ಬಿಲ್ಲವ ಯುವವಾಹಿನಿ ಅಧ್ಯಕ್ಷರಾದ ಯಶವಂತ್ ಪೂಜಾರಿ, ಬೆಂಗಳೂರು ಸಂಡೇ ಕ್ರಿಕೆಟರ್ಸ್ ಮಾಲಕರಾದಂತಹ ಮೋಹನ್, ಉದ್ಯಮಿಗಳಾದ ಶಶಿಧರ್ ಶೆಟ್ಟಿ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ, ಪಿಪಿಎಲ್ ನ ಆಯೋಜಕರಾದ ಬಾನುಪ್ರಕಾಶ್ ಆಗಮಿಸಲಿದ್ದಾರೆ.
ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ರೂ. ನಗದು ಹಾಗೂ ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ 25 ಸಾವಿರ ರೂ. ನಗದು ಹಾಗೂ ಟ್ರೋಫಿ ಮತ್ತು ಇತರ ವೈಯಕ್ತಿಕ ಬಹುಮಾನಗಳು ದೊರಕಲಿದೆ. ಒಟ್ಟು 8 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
