ಉಡುಪಿ: ರಾಜ್ಯದಲ್ಲೇ ಪ್ರಥಮ ಬಾರಿಗೆ ಮಲ್ಪೆ ಫ್ಲೋಟಿಂಗ್ ಬ್ರಿಡ್ಜ್ ಸಮುದ್ರದ ಅಲೆಗಳ ರಭಸಕ್ಕೆ ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರ ಪಾಲಾಗಿದೆ.

ಮುರಿದು ಹೋಗಿರುವ ತೇಲುವ ಸೇತುವೆ ವಿಡಿಯೋ ತುಣುಕೊಂದು ಸದ್ಯ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ.
ನಿನ್ನೆ ರಾತ್ರಿ ಸಮುದ್ರದಲ್ಲಿ ಉಂಟಾದ ಭಾರೀ ಅಲೆಗಳಿಗೆ ಫ್ಲೋಟಿಂಗ್ ಬ್ರಿಡ್ಜ್‌ಗೆ ತೀವ್ರತರದ ಹಾನಿಯಾಗಿದೆ. ನಿನ್ನೆ ಸಂಜೆ 4 ಗಂಟೆಯಿಂದಲೇ ಸೇವೆ ಸ್ಥಗಿತಗೊಂಡಿದೆ.
ಸೇತುವೆ ಸಮುದ್ರ ಪಾಲಾಗಿರುವ ಕುರಿತು ಸ್ಪಷ್ಟನೆ ನೀಡಿರುವ ಮಲ್ಪೆ ತೂಗು ಸೇತುವೆ ನಿರ್ವಾಹಕರಾದ ಸಂದೇಶ್ ಶೆಟ್ಟಿ ‘ವಾಟರ್ ಸ್ಪೋರ್ಟ್ಸ್, ಐಲ್ಯಾಂಡ್ ಗೆ ಹೋಗುವ ಬೋಟ್ ಹಾಗೂ ಫ್ಲೋಟಿಂಗ್ ಬ್ರಿಡ್ಜ್ ನ್ನು ನಿನ್ನೆ ಸಾಯಂಕಾಲದಿಂದ ನಾಳೆಯವರೆಗೂ ಸ್ಥಗಿತಗೊಳಿಸಲಾಗಿದೆ.

ನಿನ್ನೆ ಅಲೆಗಳ ಪ್ರಕ್ಷುಬ್ಧತೆ ಹೆಚ್ಚಾಗಿ ಇದ್ದ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಸೇತುವೆಯ ಸೆಂಟರ್ ಪಿನ್‌ಗಳ ಸಂಪರ್ಕ ಕಡಿತಗೊಳಿಸಿದ್ದೇವೆ. ಇದನ್ನ ಕೆಲವರು ಬೇಕಂತಲೇ ವಿಡೀಯೋ ಮಾಡಿ ಸೇತುವೆ ಮುರಿದಿದೆ ಎಂಬ ಸುಳ್ಳು ಸುದ್ದಿಗಳನ್ನು ಮಾಡ್ತಿದ್ದಾರೆ. ಇದೆಲ್ಲಾ ಶುದ್ಧ ಸುಳ್ಳು ಎಂಬ ಪ್ರತಿಕ್ರಿಯೆ ನೀಡಿದ್ದಾರೆ.