ವಿಟ್ಲ: ಅನ್ಯಕೋಮಿನ ಯುವಕನ ಕಿರುಕುಳದಿಂದಾಗಿ ಸಾವನ್ನಪ್ಪಿದ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿನಿ ಮನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ರವರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಹಿಂದೂ ಯುವತಿಯರಿಗೆ ಬೇರೆ ಬೇರೆ ರೀತಿಯಲ್ಲಿ ಆಮಿಷವೊಡ್ಡಿ ಲವ್ ಜಿಹಾದ್ ನ ನೆಲೆಯಲ್ಲಿ ಮತಾಂತರ ಮಾಡುವ ಕೃತ್ಯಗಳನ್ನು ಮಾಡುತ್ತಿದ್ದು, ಅಷ್ಟೇ ಅಲ್ಲದೇ ಬೇರೆಬೇರೆ ರೀತಿಯಲ್ಲಿ ಅವರಿಗೆ ಕಿರುಕುಳ ನೀಡಿ ಆತ್ಮಹತ್ಯೆ ಮಾಡುವಂತೆ ಪ್ರೇರೆಪಿಸುವ ಕಾರ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಆರ್ಥಿಕವಾಗಿ ಬಡತನದಲ್ಲಿರುವ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಮುಸ್ಲಿಂ ಸಮಾಜ ಆ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ, ಅವರ ಜೀವನವನ್ನು ಹಾಳು ಮಾಡುವಂತಹ ಕೃತ್ಯವನ್ನು ಮಾಡುತ್ತಿದ್ದಾರೆ. ಈ ಕೃತ್ಯಕ್ಕೆ ಕಾರಣನಾದ ಆರೋಪಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಯಾಗಿ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಗಮನ ಹರಿಸಬೇಕಾಗಿದೆ ಎಂದರು.
ಅಷ್ಟೇ ಅಲ್ಲದೇ ನೊಂದಿರುವ ಈ ಬಡ ಕುಟುಂಬಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಮತ್ತು ಹಿಂದೂ ಸಂಘಟನಾ ಪ್ರಮುಖರು, ಕರೋಪಾಡಿ ಪಂಚಾಯತ್ ಪ್ರಮುಖರು ಸೇರಿ ಮನೆ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ನೀಡಿದ್ದು, ಈ ಕಾರ್ಯಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದರು.
