ಪುತ್ತೂರು: ಚುನಾವಣೆ ಸಂದರ್ಭಗಳಲ್ಲಿ ಕೃಷಿಕರಿಗೆ ಕೃಷಿ ರಕ್ಷಣೆಗಾಗಿ ನೀಡಲಾದ ಬಂದೂಕುಗಳನ್ನು ಠೇವಣಿ ಇಡುವುದಕ್ಕೆ ವಿನಾಯಿತಿ ನೀಡುವ ಕುರಿತು ಮಾನ್ಯ ಸಂಸದರ ನಿರ್ದೇಶನದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರಾದ ಸಂಜೀವ ಮಠಂದೂರು ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಉಚ್ಛ ನ್ಯಾಯಾಲಯದ ಅಡಿಷನಲ್ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಂ ರವರನ್ನು ಭೇಟಿಯಾಗಿ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷರಾದ ದಿನೇಶ್ ಮೆದು ಮತ್ತು ಎ.ಪಿ.ಎಂ.ಸಿ ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು ಉಪಸ್ಥಿತರಿದ್ದರು.
