ಚಾರ್ಮಾಡಿ ಘಾಟ್‌ನ ಅಲೇಕಾಡು ಇತಿಹಾಸ ಪ್ರಸಿದ್ದ ಗುಳಿಗ ಕ್ಷೇತ್ರದ ಮೂಲ ವಿಗ್ರಹ ಆಲೇಕಾನ್ ಎಸ್ಟೇಟ್‌ನ ಮರವೊಂದರ ಬುಡದಲ್ಲಿ ಪತ್ತೆಯಾಗಿದೆ.
ಏ. 24 ರಂದು ಅಲೇಕಾಡು ಇತಿಹಾಸ ಪ್ರಸಿದ್ದ ಗುಳಿಗ ಕ್ಷೇತ್ರದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನಡೆದಿದ್ದು, ಈ ಸಂದರ್ಭದಲ್ಲಿ ನಡೆದ ಶ್ರೀ ಗುಳಿಗ ದೈವದ ದರ್ಶನದಲ್ಲಿ ಕ್ಷೇತ್ರದಿಂದ ಮೂರ್ನಾಲ್ಕು ಕಿ.ಮಿ ದೂರದಲ್ಲಿ ಮರವೊಂದರ ಕೆಳಗೆ ವಿಗ್ರಹ ಇದೆ ಎಂದು ತಿಳಿಸಿದ್ದರು.

ಅದರಂತೆ ಗುಳಿಗ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಮರವೊಂದರ ಕೆಳಗೆ ಅಗೆದು ನೋಡಿದಾಗ ಗುಳಿಗ ದೈವದ ಕಂಚಿನ ಮೂರ್ತಿ, ಕತ್ತಿ, ಗಂಟೆಗಳು ಮರದ ಕೆಳಗೆ ಪತ್ತೆಯಾಗಿದೆ.
ಶ್ರೀ ಗುಳಿಗ ದೈವದ ದರ್ಶನದಲ್ಲಿ ಗುಳಿಗ ದೈವದ ನುಡಿಯಂತೆ ಮೂಲ ವಿಗ್ರಹ ಪತ್ತೆಯಾಗಿದ್ದು, ವಿಗ್ರಹವನ್ನು ಪ್ರತಿಷ್ಠಾಪಿಸುವ ಬಗ್ಗೆ ಮುಂದಿನ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಜೀರ್ಣೋದ್ದಾರ ಸಮಿತಿ ತಿಳಿಸಿದೆ.