ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಕೋವಿಡ್ 19 ಜನಜಾಗೃತಿ ಜಾಥಾ ನಡೆಯಿತು. ಪುತ್ತೂರಿನ ಮಿನಿ ವಿಧಾನಸೌಧದ ಸುತ್ತಲಿನ ಪ್ರದೇಶದಲ್ಲಿ ಈ ಜಾಥಾವನ್ನು ನಡೆಸಲಾಯಿತು ಹಾಗೂ ಸುತ್ತಲಿನ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಕೋವಿಡ್ ಜಾಗೃತಿ ಮಾಹಿತಿ ನೀಡಲಾಯಿತು.
ಸ್ಯಾನಿಟೈಸರ್ ಅನ್ನು ನಿರಂತರವಾಗಿ ಬಳಸುವ ಬಗೆಗೆ, ಅರವತ್ತಕ್ಕಿಂತ ಹೆಚ್ಚಿನ ವಯಸ್ಸಿನವರು ಕಡ್ಡಾಯವಾಗಿ ಕೋವಿಡ್ ವಾಕ್ಸೀನ್ ಹಾಕಿಸುವಂತೆ, ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗೆಗೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗೆಗೆ ಮಾತ್ರವಲ್ಲದೆ ಕೋವಿಡ್ ಕುರಿತಾಗಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗೆಗೆ ಮಾಹಿತಿ ನೀಡಲಾಯಿತು.
ಅಂಗಡಿಗಳಿಗೆ ಗ್ರಾಹಕರು ಬಂದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗೆಗೂ ಜಾಗೃತಿ ಮೂಡಿಸಲಾಯಿತು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ ಸಹಕರಿಸಿದರು.