ಪುತ್ತೂರಿನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಹಾಗೂ ಹಲವು ದೈವ, ದೇವಸ್ಥಾನ ವಾಸ್ತುಶಿಲ್ಪಿಯಾಗಿದ್ದ ತುಂಬೆಯ ಸಂತೋಷ್ ಕುಮಾರ್ ಕೊಟ್ಟಿಂಜ (43) ರವರು ಮೇ.13 ರಂದು ನಿಧನರಾದರು.

ಸಂತೋಷ್ ಕುಮಾರ್ ರವರು ಮಂಗಳೂರಿನ ಎಸ್. ಕೆ ಬಿಲ್ಡರ್ಸ್‌ನ ಮಾಲಕರಾಗಿದ್ದು, ಆರ್ಕಿಟೆಕ್ಟ್ ಆಗಿ ದೇಯಿ ಬೈದೆತಿ ಹಾಗೂ ಕೋಟಿ ಚೆನ್ನಯರ ಬಗ್ಗೆ ಆಳವಾದ ಅಧ್ಯಯನ ನಡೆಸಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯ ವಾಸ್ತುಶಿಲ್ಪಿಯಾಗಿ ಸುಂದರ ವಾಸ್ತು ಯೋಗ್ಯ ದೈವಸ್ಥಾನ ನಿರ್ಮಿಸಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುಡಿಯುತ್ತಿರುವ ಇವರು ಶ್ರೀ ಕ್ಷೇತ್ರ ಗೆಜ್ಜೆಗಿರಿ ಮಾತ್ರವಲ್ಲದೆ ಹಲವಾರು ದೇವಸ್ಥಾನ, ದೈವಸ್ಥಾನ ಹಾಗೂ ಸರ್ವಜಾತಿ, ಜನಾಂಗದ ಅನೇಕ ಮಂದಿರ, ಸಭಾ ಭವನ ನಿರ್ಮಾಣದಲ್ಲಿ ವಾಸ್ತುಶಿಲ್ಪಿಯಾಗಿದ್ದರು.