ಕಡಬ: ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಪುರೋಹಿತರಾದ ಕೇಶವ ಕಲ್ಲುರಾಯ ಬಂಬಿಲ ರವರ ಮಾರ್ಗದರ್ಶನದಲ್ಲಿ ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯಲ್ಲಿ ನಡೆಯುತ್ತಿರುವ ಗೃಹಪ್ರವೇಶ, ಧರ್ಮದೈವ ಜುಮಾದಿ ಬಂಟ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಭೇಟಿ ನೀಡಿದರು.
ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂಸದರು ಕದಂಬ ಗಿಡವನ್ನು ನೆಟ್ಟು, ಪರಿಸರ ಸಂರಕ್ಷಣೆಯ ಬಗೆಗಿನ ಮಹತ್ವ ಮತ್ತು ಅನಿವಾರ್ಯವನ್ನು ತಿಳಿಸಿದರು.

ಈ ವೇಳೆ ದೇವಸ್ಯ ತರವಾಡು ಮನೆಯ ಹಿರಿಯರು, ಕುಟುಂಬಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ಮಹಾಗಣಪತಿ ಹೋಮ, ತುಳಸಿ ಪ್ರತಿಷ್ಠೆ, ದ್ವಾರಪಾಲಕ ಪೂಜೆ, ಬ್ರಹ್ಮಕಲಶ ಪೂಜೆ, ದೇವಸ್ಯ ತರವಾಡು ಗೃಹಪ್ರವೇಶ, ನಂತರ ಧರ್ಮದೈವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಿತು.

ಮಧ್ಯಾಹ್ನ ತಂಬಿಲ ಸೇವೆ, ಹರಿ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಧರ್ಮದೈವ ಮತ್ತು ಸಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.