ಪುಂಜಾಲಕಟ್ಟೆ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ ಎಸ್.ಐ.ಮೇಲೆ ವಾಹನ ನುಗ್ಗಿಸಿ ಹತ್ಯೆ ಮಾಡಲು ಪ್ರಯತ್ನ ಮಾಡಿದ ಘಟನೆ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಮೇ.15 ರ ಮುಂಜಾನೆ ವೇಳೆ ನಡೆದಿದೆ.

ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಪುಂಜಾಲಕಟ್ಟೆ ಎಸ್. ಐ.ಸುತೇಶ್ ಎಂಬವರ ಮೇಲೆ ದನ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನ ನುಗ್ಗಿಸಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ.
ರಾತ್ರಿ ವೇಳೆ ರೌಂಡ್ಸ್ ನಲ್ಲಿದ್ದ ಎಸ್‌ಐ.ಸುತೇಶ್ ಅವರು ಕುದ್ಕೊಳಿ ಎಂಬಲ್ಲಿ ಸಂಶಯಾಸ್ಪದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಚಾಲಕ ವಾಹನ ನಿಲ್ಲಿಸದೆ ಎಸ್.ಐ.ಮೇಲೆ ನುಗ್ಗಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ಎಸ್.ಐ.ಕೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ವಾಹನದಲ್ಲಿ ಇಬ್ಬರು ಆರೋಪಿಗಳು ಇದ್ದು, ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ವಾಹನದಲ್ಲಿ ಮೂರು ದನಗಳಿದ್ದು , ಒಂದು ದನ ಹಾಲು ಕೊಡುವುದು ಇನ್ನೊಂದು ಗಬ್ಬದ ದನ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.