ಪುತ್ತೂರು: ಸಮಸ್ಯೆಗಳಿಗೆ ಮೆಸ್ಕಾಂಗೆ ದೂರು ನೀಡಲು ಬರುವ ಸಾರ್ವಜನಿಕರಿಗೆ ಯಾವುದೇ ರೀತಿ ಸ್ಪಂದಿಸದೆ ಪುತ್ತೂರು ನಗರ ಮೆಸ್ಕಾಂ ಕಚೇರಿಯಿಂದ ಬನ್ನೂರು ಮೆಸ್ಕಾಂ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ವ್ಯಕ್ತ ಪಡಿಸುತ್ತಿದ್ದಾರೆ.
ಗ್ರಾಹಕರೊಬ್ಬರಿಗೆ ಮೊದಲು 400ರೂ. ಸರಾಸರಿ ಬರುತ್ತಿದ್ದು, ಕೆಲ ತಿಂಗಳುಗಳಲ್ಲಿ ವಿದ್ಯುತ್ ಬಳಕೆಗಿಂತ ದರ ಏರಿಕೆಯಾಗಿ 2,300 ರೂ. ವರೆಗೆ ವಿದ್ಯುತ್ ಬಿಲ್ ಬಂದಿದ್ದು, ಈ ಹಿನ್ನೆಲೆ ಪುತ್ತೂರು ಮೆಸ್ಕಾಂ ಕಚೇರಿಗೆ ತೆರಳಿದ ವೇಳೆ ಅಲ್ಲಿಂದ ಬನ್ನೂರು ಮೆಸ್ಕಾಂ ಕಚೇರಿಗೆ ತೆರಳಲು ಹೇಳಿದ್ದು, ಅಲ್ಲಿ ಚಲನ್ ಕಟ್ಟಿದ ನಂತರ ಪುತ್ತೂರು ಮೆಸ್ಕಾಂ ಕಚೇರಿಗೆ ತೆರಳಲು ಹೇಳಿದ್ದು, ಅಲ್ಲಿಂದ ಮತ್ತೆ ಬನ್ನೂರು ಮೆಸ್ಕಾಂ ಕಚೇರಿಗೆ ತೆರಳಲು ಹೇಳಿದ್ದು, ಈ ರೀತಿಯಾಗಿ ಸಾರ್ವಜನಿಕರನ್ನು ಅಲ್ಲಿಂದ-ಇಲ್ಲಿಗೆ, ಇಲ್ಲಿಂದ-ಅಲ್ಲಿಗೆ ಅಲೆದಾಡಿಸುವುದು ಯಾವ ರೀತಿಯ ನ್ಯಾಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಮಸ್ಯೆಗಳಿಗೆ ಮೆಸ್ಕಾಂಗೆ ದೂರು ನೀಡಲು ಬರುವ ಸಾರ್ವಜನಿಕರನ್ನು ಈ ರೀತಿಯಾಗಿ ಅಲೆದಾಡಿಸುವುದು ಯಾವ ರೀತಿಯ ನ್ಯಾಯವಾಗಿದೆ..?? ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಸಾರ್ವಜನಿಕ ವರ್ಷಂಪ್ರತಿ ಇದೇ ರೀತಿ ಅಲ್ಲಿಂದ-ಇಲ್ಲಿಗೆ, ಇಲ್ಲಿಂದ-ಅಲ್ಲಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಗ್ರಾಹಕರು ಮೆಸ್ಕಾಂ ಕಚೇರಿಯವರ ನಡೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದೆ ಈ ರೀತಿ ಅವರನ್ನು ಅಲೆದಾಡಿಸಿದರೆ, ಎಲ್ಲರಿಗೂ ಸಮಸ್ಯೆಯಾಗಲಿದೆ. ಶೀಘ್ರ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಸಾರ್ವಜನಿಕರ ಅಲೆದಾಟಕ್ಕೆ ಶೀಘ್ರ ಮುಕ್ತಿ ದೊರಯಬೇಕು. ಬಳಕೆಗಿಂತ ಜಾಸ್ತಿ ಬರುವ ವಿದ್ಯುತ್ ಬಿಲ್ ದರದ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.