ಪುತ್ತೂರು: ಬೆಂಗಳೂರಿನ ಪಡುಕೋಣೆ-ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರ ( ಸಿಎಸ್ ಇ) ದಲ್ಲಿ ನಡೆದ ಪ್ರಥಮ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ 2022 ರಲ್ಲಿನ ಈಜು ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಈಜುಪಟು ಪಾರ್ಥ ವಾರಣಾಶಿ ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ.

50 ಮೀ.ಬ್ಯಾಕ್ ಸ್ಟ್ರೋಕ್, 50 ಮೀ.ಬಟರ್ ಪ್ಲೈ, 50 ಮೀ.ಪ್ರೀ ಸ್ಟೈಲ್, 4×50 ಮಿಕ್ಸೆಡ್ ಪ್ರೀ ಸ್ಟೈಲ್ ರಿಲೇ ಯಲ್ಲಿ ಪ್ರಥಮ ಸ್ಥಾನ ಪಡದು ಚಿನ್ನದ ಪದಕ ಗಳಿಸಿದ್ದಾರೆ.
ಕರ್ನಾಟಕ ಕೇರಳ ಗಡಿಭಾಗವಾದ ಬಂಟ್ವಾಳ ತಾಲೂಕಿನ ಅಡ್ಯನಡ್ಕ ವಾರಣಾಶಿಯ ನಿವಾಸಿಯಾಗಿರುವ ಇವರು ಪರ್ಲಡ್ಕದ ಬಾಲವನ ಈಜು ತರಬೇತಿ ಕ್ಲಬ್ ಮೂಲಕ ನೂರಾರು ಈಜು ಪ್ರತಿಭೆಗಳಿಗೆ ತರಬೇತಿ ನೀಡಿದ್ದಾರೆ.
ಸೌತ್ ಕೊರಿಯಾದಲ್ಲಿ ನಡೆದ ಫಿನಾ 2010 ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಪಾರ್ಥ ಅವರು ಭಾರತ ತಂಡದ ಕೋಚ್ ಆಗಿ ಪ್ರತಿನಿಧಿಸಿದ್ದರು. ಸರ್ಫ್ ಲೈಫ್ ಸೇವಿಂಗ್, ಇಂಡಿಯಾದ ನಿರ್ದೇಶಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.