ಮಡಿಕೇರಿ: ಕೊಡಗಿನಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ಮಾನಂದವಾಡಿಯ ಕುರಿಯಚ್ಚನ್ – ಸಲಿನಾಮ ಕ್ರೈಸ್ತ ದಂಪತಿಯನ್ನು ಮಂಚಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪಣಿ ಎರವರ ಮುತ್ತ ಎಂಬುವರನ್ನ ಮತಾಂತರ ಮಾಡಲು ಯತ್ನ ನಡೆದಿದ್ದಾಗ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮತಾಂತರಕ್ಕೆ ತುತ್ತಾಗುತ್ತಿದ್ದ ಪಣಿ ಎರವರ ಮುತ್ತ ಎಂಬುವವರು ನಂತರ, ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತಾಂತರ ವಿರೋಧಿ ಸುಗ್ರೀವಾಜ್ಞೆಗೆ ಮಂಗಳವಾರ ಒಪ್ಪಿಗೆ ನೀಡಿದ್ದಾರೆ. ಸುಗ್ರೀವಾಜ್ಞೆಯನ್ನು ಪ್ರಕಟಿಸುವ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅಂದರೆ ರಾಜ್ಯದಲ್ಲಿ ಈಗ ಕಾನೂನು ಜಾರಿಯಲ್ಲಿರುತ್ತದೆ. ಈ ಮೂಲಕ ಮತಾಂತರ ತಡೆ ಕಾನೂನನ್ನು ಜಾರಿಗೊಳಿಸಿದ 9ನೇ ರಾಜ್ಯ ಕರ್ನಾಟಕವಾಗಿದೆ.
ಈ ಕಾನೂನು ವಂಚನೆ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಮದುವೆಯ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನು ನಿಷೇಧಿಸುತ್ತದೆ. ಬಲವಂತದ ಮತಾಂತರಕ್ಕೆ 25,000 ರೂ ದಂಡದೊಂದಿಗೆ 3-5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.