ಪುತ್ತೂರು: ಮೂಡಂಬೈಲು ರವಿ ಶೆಟ್ಟಿ, ದೋಣಿಂಜೆಗುತ್ತು ರವರ ಜೀವನ ಚಿತ್ರಣ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ರವರು ಬರೆದಿರುವ ‘ರವಿತೇಜ’ ಕೃತಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ ಹಠಾತ್ ನಿಧನರಾದ ಖ್ಯಾತ ಕಬಡ್ಡಿ ಆಟಗಾರ ಉದಯ್ ಚೌಟ ರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಉದಯ್ ಚೌಟ ರನ್ನು ನೆನೆದ ರವಿಶೆಟ್ಟಿ ರವರು ಉದಯ್ ಚೌಟ ರವರ ಅಕಾಲಿಕ ಮರಣದಿಂದಾಗಿ ಎಲ್ಲರಿಗೂ ಆಘಾತವಾಗಿದೆ. ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದಾಗ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದರು. ಕಾರ್ಯಕ್ರಮದ ಬಗ್ಗೆ ತಮ್ಮ ವ್ಯಾಟ್ಸಪ್ ನಲ್ಲಿ ಸ್ಟೇಟಸ್ ಕೂಡ ಹಾಕಿ ಶುಭಾಶಯ ವ್ಯಕ್ತಪಡಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
