ಪುತ್ತೂರು: ಬಲ್ನಾಡು ಗ್ರಾ.ಪಂ ವಾರ್ಡ್-1 ರ ತೆರವಾದ ಸ್ಥಾನಕ್ಕೆ ಮೇ.20 ರಂದು ಚುನಾವಣೆ ನಡೆದಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ವಿನಯ ಬೆಳಿಯೂರುಕಟ್ಟೆಯವರು ಗೆಲುವು ಸಾಧಿಸಿದ್ದಾರೆ.

ಬಲ್ನಾಡು ಗ್ರಾ.ಪಂ ವಾರ್ಡ್-1 ರ ಸದಸ್ಯೆ ಯಮುನಾ ರವರ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆ ಮೇ. 20 ರಂದು ಚುನಾವಣೆ ನಡೆದಿತ್ತು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ವಿನಯ ಬೆಳಿಯೂರುಕಟ್ಟೆ ಗೆಲುವು ಸಾಧಿಸಿದ್ದಾರೆ. ಈ ಮೊದಲು ಈ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದು, ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮಾವತಿ – 314 ಮತ ಪಡೆದಿದ್ದರೆ, ವಿನಯ- 579 ಮತ ಗಳಿಸಿ 265 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ ವಿನಯ ರವರಿಗೆ ಕಾಂಗ್ರೆಸ್ ಮುಖಂಡರು ಅಭಿನಂದನೆ ಸಲ್ಲಿಸಿದರು.