ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಶ್ರೀ ನವಮಿ ಜ್ಯುವೆಲ್ಲರ್ಸ್ ಅಂಗಡಿಗೆ ಕಳ್ಳರು ನುಗ್ಗಿದ ಘಟನೆ ಮಾ.25 ರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಜ್ಯುವೆಲ್ಲರ್ಸ್ ಅಂಗಡಿಯ ರೋಲಿಂಗ್ ಶೆಟರ್ ತೆಗೆದು ಒಳಗಿನ ಸೈಡ್ ಗೇಟ್ ನ ಬೀಗ ಒಡೆದ ಕಳ್ಳರು ಒಳನುಗಿ ಚಿನ್ನಾಭರಣ,ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ.
ಪುತ್ತೂರಿನಲ್ಲಿ ಇಂದು ಇದು ಎರಡನೇ ಪ್ರಕರಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪುತ್ತೂರು ಪೊಲೀಸ್ ಠಾಣೆಯ ಸಮೀಪದ ಶ್ರೀಧರ್ ಭಟ್ ಅಂಗಡಿ, ಕೋರ್ಟ್ ರಸ್ತೆಯಲ್ಲಿನ ಶ್ರೀ ನವಮಿ ಜ್ಯುವೆಲ್ಲರ್ಸ್, ಕೋರ್ಟ್ ರಸ್ತೆಯಲ್ಲಿನ ಶೃತಿ ಜ್ಯುವೆಲ್ಲರ್ಸ್ ಮತ್ತು ಹಿರಣ್ಯ ಮೆಷಿನ್ ಕಟ್ಟಿಂಗ್ ಗೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.