ಪುತ್ತೂರು: ಕೊರೋನಾ 2 ನೇ ಅಲೆಯಿಂದ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪುತ್ತೂರು ಬಿಜೆಪಿ ಯುವ ಮೋರ್ಚಾದ ವತಿಯಿಂದ ಮಾ.25ರಂದು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಯಿತು.
ಪುತ್ತೂರಿನ ಪ್ರಮುಖ ಸ್ಥಳಗಳಲ್ಲಿ (ಪುತ್ತೂರು ಬಸ್ ಸ್ಟಾಂಡ್ , ವಿವೇಕಾನಂದ ಕಾಲೇಜು, ಫಿಲೋಮಿನಾ ಕಾಲೇಜ್ ಮಹಾಲಿಂಗೇಶ್ವರ ದೇವಸ್ಥಾನ )ಹಾಗೂ ಜನನಿಬಿಡ ಪ್ರದೇಶದಲ್ಲಿ ಉಚಿತ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಯುವಮೋರ್ಚಾ ನಗರ ಮಂಡಲದ ಅಧ್ಯಕ್ಷ ಸಚಿನ್, ಪ್ರಧಾನ ಕಾರ್ಯದರ್ಶಿ ಶವಿನ್, ಉಪಾಧ್ಯಕ್ಷ ಪ್ರಮೋದ್ ಸಾಲ್ಯಾನ್ ಕಾರ್ಯದರ್ಶಿ ಗಳಾದ ಜಗದೀಶ್ ಜೆ ಗಾಣಿಗ ಕೌಶಿಕ್ ನಿತೇಶ್ ಹಾಗೂ ಯುವಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.