ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಬಿದ್ದ ಘಟನೆ ವಿಟ್ಲ ಮೇಗಿನಪೇಟೆ ತಿರುವಿನಲ್ಲಿ ಮೇ.24 ರಂದು ನಡೆದಿದೆ.

ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮೇಗಿನಪೇಟೆ ಬಳಿ ಹೊಂಡಕ್ಕೆ ಬಿದ್ದಿದೆ.

ಘಟನೆಯಿಂದಾಗಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
