ಮಂಗಳೂರು: ಒಳಉಡುಪಿನಲ್ಲಿ ಅಕ್ರಮ ಚಿನ್ನ ಸಾಗಿಸುತ್ತಿದ್ದ ಕಾಸರಗೋಡು ಮೂಲದ ಪ್ರಯಾಣಿಕರೊಬ್ಬರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮದ್ ಕಲ್ಲಾರ್ ಎಂಬವರು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದು ಒಳ ಉಡುಪುಗಳಲ್ಲಿ ಸರಪಳಿ ರೀತಿಯಲ್ಲಿ 1.23 ಕೆ.ಜಿ ತೂಕದ 57,14,940 ರೂಪಾಯಿ ಮೌಲ್ಯದ ಚಿನ್ನವನ್ನು ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ.
ಕಸ್ಟಮ್ಸ್ ಜಿಲ್ಲಾಧಿಕಾರಿ ಡಾ.ಕಪಿಲ್ ಗಡೆ ಐಆರ್ ಎಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಶ್ರೀಕಾಂತ್, ನಾಗೇಶ್ ಕುಮಾರ್ ನವೀನ್ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.