ತಲೆ ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರಲ್ಲೂ ಕಂಡು ಬರುವಂತಹ ಸಮಸ್ಯೆಗಳಲ್ಲಿ ಒಂದು. ಈ ರೀತಿಯ ಸಮಸ್ಯೆ ಕಾಣಿಸಿಕೊಂಡಗ ಮನೆಯಲ್ಲಿಯೇ ಸಿಗುವಂತಹ ಮನೆ ಮದ್ದುಗಳನ್ನು ಬಳಸಿ ಸಮಸ್ಯೆಯಿಂದ ಸುಲಭವಾಗಿ ಮುಕ್ತಿಯನ್ನು ಪಡೆಯಬಹುದು.
ತಲೆ ಕೂದಲು ಉದುರುವ ಸಮಸ್ಯೆಗೆ ಮನೆ ಮದ್ದುಗಳು : ಒಂದು ಲೋಟ ಮೊಸರಿಗೆ ಒಂದು ನಿಂಬೆಹಣ್ಣು ಹಾಕಿ ಅರ್ಥ ಗಂಟೆಗಳ ಕಾಲ ನೆನೆಯಲು ಬಿಡಬೇಕು ನಂತರ ಅದನ್ನು ತಲೆಕೂದಲಿಗೆ ಹಾಕಿಕೊಂಡು ಒಂದು ಗಂಟೆಯ ನಂತರ ಸ್ನಾನ ಮಾಡಬೇಕು ಇದರಿಂದ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಬೆಟ್ಟದ ನಲ್ಲಿಕಾಯಿಯನ್ನು ಮಿಕ್ಸಿಯಲ್ಲಿ ರೊಬ್ಬಿ ನಂತರ ತಲೆ ಕೂದಲಿಗೆ ಲೇಪನ ಮಾಡಿಕೊಂಡು ಅರ್ಥ ಗಂಟೆ ಅಥವಾ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ತಲೆಯಲ್ಲಿನ ಹೊಟ್ಟು ನಿವಾರಣೆಯಾಗಿ ಕೂದಲು ಉದುರುವುದು ನಿಲ್ಲುತ್ತದೆ.
ಕೂದಲು ಉದುರುವಿಕೆಯನ್ನು ತಡೆಯಲು ತೆಂಗಿನ ಎಣ್ಣೆ ಅಥವಾ ತೆಂಗಿನ ಹಾಲನ್ನು ಹೆಚ್ಚಾಗಿ ಬಳಸಿದರೆ ಆದಷ್ಟು ಬೇಗ ಕೂದಲು ಉದುರುವಿಕೆ ಶಮನವಾಗುತ್ತದೆ. ಮೆಹಂದಿ ಇದನ್ನು ಕೂದಲಿಗೆ ಬಣ್ಣ ನೀಡಲು ಅಥವಾ ಕಂಡೀಶನರ್ ಆಗಿ ಬಳಸಲಾಗುತ್ತದೆ. ಆದರೆ ಮೆಹಂದಿಯಲ್ಲಿ ಇವೆರಡರ ಜೊತೆಗೆ ಕೂದಲನ್ನು ಬಲಗೊಳಿಸುವ ಅಂಶ ಸಹ ಇರುತ್ತದೆ. ಇದನ್ನು ಲೇಪನ ಮಾಡಿಕೊಳ್ಳುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
ಮೊಟ್ಟೆಯು ಕೂದಲು ಉದುರುವಿಕೆಯನ್ನು ತಡೆಯಲು ಬೇಕಾದ ಅಂಶಗಳನ್ನು ಒಳಗೊಂಡಿರುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ಕೂದಲಿಗೆ ಹಂಚಿಕೊಂಡು 1 ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಉದುರುವಿಕೆ ನಿಧಾನವಾಗಿ ಕಡಿಮೆಯಾಗುತ್ತದೆ. ದಾಸವಾಳದ ಹೂವನ್ನು ಮೊಸರು ಅಥವಾ ಹಾಲು ಹಾಕಿಕೊಂಡು ರೊಬ್ಬಿಕೊಂಡ ನಂತರ ತಲೆ ಕೂದಲಿಗೆ ಹಂಚಿಕೊಂಡರೇ ತಲೆಯಲ್ಲಿನ ಡ್ಯಾಂಡ್ರಫ್ ಕಡಿಮೆಯಾಗುತ್ತದೆ.
ನಿಂಬೆಹಣ್ಣು ಮತ್ತು ಮೊಸರನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಸಂಪೂರ್ಣವಾಗಿ ಹಚ್ಚಿ 15 -20 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನೋದಿಗೆ ತೊಳೆಯಬೇಕು. ವಾರಕ್ಕೊಮ್ಮೆ ಈ ರೀತಿ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಮತ್ತು ತಲೆಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಟೊಮೆಟೊ ರಸದ ಜೊತೆಗೆ ತುಳಸಿ ಸೊಪ್ಪನ್ನು ಮಿಕ್ಸ್ ಮಾಡಿಕೊಂಡು ತಲೆಕೂದಲಿಗೆ ಹಚ್ಚಿಕೊಳ್ಳುವುದರಿಂದ ತಲೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.
ಅಲೋವೆರಾ ಮತ್ತು ಈರುಳ್ಳಿ ರಸವನ್ನು ರೋಸ್ ವಾಟರ್ ಜೊತೆ ಸೇರಿಸಿಕೊಂಡು ತಲೆ ಕೂದಲಿಗೆ ಹಂಚಿಕೊಂಡರೆ ಕೂದಲು ಉದುರುವಿಕೆ ನಿಲ್ಲುತ್ತದೆ. ಸೀಗೆಕಾಯಿ ಪುಡಿಯನ್ನು ಬಳಸುವುದರಿಂದ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ. ಮನೆಯಲ್ಲಿಯೇ ಸಿಗುವಂತಹ ಮನೆ ಮದ್ದುಗಳನ್ನು ಬಳಸಿಕೊಂಡು ತಲೆಕೂದಲು ಉದುರುವಿಕೆಯಿಂದ ಮುಕ್ತಿಯನ್ನು ಪಡೆಯಬಹುದು. ವಾರದಲ್ಲಿ ಒಂದು ದಿನ ಈ ಮನೆ ಮದ್ದುಗಳನ್ನು ಕೂದಲಿಗೆ ಲೇಪನ ಮಾಡಿಕೊಂಡರೆ ಸಾಕು. ಕೂದಲಿನ ಯಾವುದೇ ಸಮಸ್ಯೆಯಿಂದ ಕೂಡ ಮುಕ್ತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.