ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ, ತಾಲೂಕು ಬಂಟರ ಸಂಘ, ಯುವ ಮತ್ತು ವಿದ್ಯಾರ್ಥಿ ಬಂಟರ ಸಂಘಗಳ ಸಹಯೋಗದೊಂದಿಗೆ ಮಾ. ೨೮ ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬೆಳಿಗ್ಗೆ ೯.೩೦ ರಿಂದ ಅಪರಾಹ್ನ ೨ ಗಂಟೆಯ ತನಕ ಮಹಿಳಾ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಮಾಜಿ ಶಾಸಕಿ ಹಾಗೂ ತಾಲೂಕು ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷೆ ಮಲ್ಲಿಕಾ ಪ್ರಸಾದ್‌ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಮೀರಾ ಭಾಸ್ಕರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ಅಧ್ಯಕ್ಷರುಗಳಾದ ಸವಣೂರು ಕೆ.ಸೀತಾರಾಮ ರೈ, ಜಗನ್ನಾಥ ರೈ ಮಾದೋಡಿ, ಲಕ್ಷ್ಮಿನಾರಾಯಣ ಶೆಟ್ಟಿ ಅರಿಯಡ್ಕ, ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಾರಕರೆ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪ್ರಣಮ್ ಶೆಟ್ಟಿ ರವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮತ್ತು ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷೆ ಕುಮುದಾ ಎಲ್.ಎನ್.ಶೆಟ್ಟಿರವರುಗಳು ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಡಲಿದ್ದಾರೆ. ನ್ಯಾಯವಾದಿ ಸ್ವಾತಿ ಜೆ.ರೈರವರು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಸನ್ಮಾನಿಸಲ್ಪಡುವವರು : ಡಾ.ವನಿತಾ ಶೆಟ್ಟಿ, ಜಿ.ಪಂ, ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ, ಕೆದಂಬಾಡಿ ಗ್ರಾಮ ಪಂಚಾಯತ್ ಕಾರ್‍ಯದರ್ಶಿ ಸುನಂದಾ ರೈ, ಬ್ಯೂಟಿಷಿಯನ್ ಮಾಧವಿ ಎಂ. ರೈ, ತಾಲೂಕು ಬಂಟರ ಸಂಘಧ ಮಾಜಿ ಅಧ್ಯಕ್ಷೆ ಪುಷ್ಪ ಜೆ. ರೈ, ಕೃಷಿಕರಾದ ದೇವಕಿ ಕೆ.ರೈ ಅನಾಜೆ, ಸೆಂಟ್ರಲ್ ರಿಸರ್ವ್ ಪೋಲೀಸ್ ಸವಿತಾ ಕೋಡಿಂಬಾಡಿ, ರಿಲಯನ್ಸ್ ಲೈಫ್ ಇನ್ಸೂರೆನ್ಸ್ ಎಡ್ವೈಸರ್ ನೇಹಾ ರೈ ನೆಲ್ಲಿಕಟ್ಟೆರವರನ್ನು ಸನ್ಮಾನಿಸಲಾಗುವುದು.
ಗೌರವ ಸಮರ್ಪಣೆ : ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಬಲ್ನಾಡು ಗ್ರಾ.ಪಂ, ಅಧ್ಯಕ್ಷೆ ಇಂದಿರಾ ರೈ, ಆರ್ಯಾಪು ಗ್ರಾ.ಪಂ, ಉಪಾಧ್ಯಕ್ಷೆ ಪೂರ್ಣಿಮಾ ರೈ, ಸಾಹಿತಿ ಮಲ್ಲಿಕಾ ಜೆ.ರೈ ಗುಂಡ್ಯಡ್ಕರವರುಗಳು ಗೌರವ ಸಮರ್ಪಣೆ ಸ್ವೀಕರಿಸಲಿದ್ದಾರೆ.
ಪ್ರತಿಭಾ ಪುರಸ್ಕಾರ : ವಿದ್ಯಾರ್ಥಿನಿಗಳಾದ ಪಿಯುಸಿಯ ಸಾರ್ವರಿ ಹಾಗೂ ಎಸ್‌ಎಸ್‌ಎಲ್‌ಸಿಯ ಪುಣ್ಯರವರು ಪ್ರತಿಭಾ ಪುರಸ್ಕಾರವನ್ನು ಪಡೆಯಲಿದ್ದಾರೆ ಹಾಗೂ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷೆ ಮೀರಾ ಭಾಸ್ಕರ್ ರೈ ಮಾದೋಡಿ, ಪ್ರದಾನ ಕಾರ್‍ಯದರ್ಶಿ ವತ್ಸಲಾ ಪದ್ಮನಾಭ ಶೆಟ್ಟಿ ಹಾಗೂ ಕೋಶಾಧಿಕಾರಿ ಅನುಶ್ರೀ ಬಿ.ಶೆಟ್ಟಿರವರು ತಿಳಿಸಿದ್ದಾರೆ.