ಪುತ್ತೂರು: ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿ, ಮುಂಡೂರು ಇದರ ಆಶ್ರಯದಲ್ಲಿ ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವಠಾರದಲ್ಲಿ ಲೋಕ ಕಲ್ಯಾಣಾರ್ಥವಾಗಿ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರ ಉಪಸ್ಥಿತಿಯಲ್ಲಿ 8ನೇ ವರ್ಷದ ಸಾರ್ವಜನಿಕ ‘ ಶ್ರೀ ಶನಿಪೂಜೆ’ ಹಾಗೂ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಯವರಿಂದ ಅರ್ಧ ಏಕಾಹ ಭಜನೆ ಜೂ.25 ರಂದು ನಡೆಯಲಿದೆ.
ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಸರೋಜಿನಿ ಟಿ.ಶೆಟ್ಟಿ ನೇಸರ ಕಂಪ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸದಾಶಿವ ಶೆಟ್ಟಿ, ಪಟ್ಟೆ ರವರು ಆಗಮಿಸಲಿದ್ದಾರೆ.
ಸಂಜೆಯ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ ರವರು ವಹಿಸಲಿದ್ದಾರೆ. ಧಾರ್ಮಿಕ ಭಾಷಣವನ್ನು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಸರಸ್ವತಿ ರವರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪರ್ಲಡ್ಕ ಶ್ರೀದುರ್ಗಾ ಕ್ಲಿನಿಕ್ ನ ಡಾ. ಹರಿಕೃಷ್ಣ ಪಾಣಾಜೆ, ಶ್ರೀರಾಮ ಕನ್ಸ್ಟ್ರಕ್ಷನ್ ನ ಇಂಜಿನಿಯರ್ ಪ್ರಸನ್ನ ಎನ್. ಭಟ್, ಪ್ರಗತಿಪರ ಕೃಷಿಕರಾದ ಆನಂದ ಪಿ. ಭಂಡಾರಿ ಸೊರಕೆ, ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರು, ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮುರಳೀಧರ ಭಟ್ ಬಂಗಾರಡ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪ ಪುರಂದರ ಗೌಡ ನಡುಬೈಲು ರವರು ಆಗಮಿಸಲಿದ್ದಾರೆ..

























