ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಹಾಗೂ ರಾಮೋತ್ಸವ ಸಮಿತಿ ಪುತ್ತೂರು ವತಿಯಿಂದ ನಡೆಯಲಿರುವ “ಶ್ರೀ ರಾಮೋತ್ಸವ 2021” ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ಬೆಳಿಗ್ಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುರುಳಿ ಕೃಷ್ಣ ಹಸಂತಡ್ಕ ಬಜರಂಗದಳದ ಪ್ರಾಂತ ಸಹ ಸಂಚಾಲಕರು, ಕೃಷ್ಣ ಪ್ರಸನ್ನ ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷದ್ , ಸತೀಶ್ ಬಿಎಸ್ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆ, ಬಾಮಿ ಅಶೋಕ್ ಶೆಣೈ,ಮನೋಹರ್ ಕಲ್ಲಾರೆ, ಶ್ರೀಧರ್ ತೆಂಕಿಲ ಜಿಲ್ಲಾ ಸಂಯೋಜಕರು, ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ಹರೀಶ್ ಕುಮಾರ್ ದೋಳ್ಪಾಡಿ ಪ್ರಖಂಡ ಸಂಯೋಜಕರು, ರಾಮ್ ಪ್ರಸಾದ್ ಮಯ್ಯ ಮತ್ತು ಇತರರು ಉಪಸ್ಥಿತರಿದ್ದರು.
