ಮಂಗಳೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ಮನೆಯಿಂದ ಬೆಳಗ್ಗೆ ಕಾಲೇಜಿಗೆ ಹೋಗಲೆಂದು ರಸ್ತೆ ದಾಟುತ್ತಿದ್ದಾಗ ಸರ್ವಿಸ್ ಬಸ್ಸೊಂದು ಡಿಕ್ಕಿ ಹೊಡೆದು ಮೃತ ಪಟ್ಟ ಹೃದಯ ವಿದ್ರಾವಕ ಘಟನೆ ಮರಕಡ ಜ್ಯೋತಿ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕಾಲೇಜ್ ವಿದ್ಯಾರ್ಥಿನಿಯನ್ನು ಪವಿತ್ರಾ(21) ಜ್ಯೋತಿನಗರ ನಿವಾಸಿ ಎಂದು ಗುರುತಿಸಲಾಗಿದೆ.
ಗಡಿಬಿಡಿಯಲ್ಲಿ ರಸ್ತೆ ದಾಟುತ್ತಿದ್ದಾಗ ನವದುರ್ಗಾ ಎಂಬ ಸರ್ವಿಸ್ ಬಸ್ಸೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಹತ್ತಿರದಲ್ಲೇ ಆಕೆಯ ಮನೆಯಿದ್ದು ಆಕೆಯ ತಾಯಿ ಸೇರಿದಂತೆ ಕುಟುಂಬಿಕರು ಸ್ಥಳದಲ್ಲಿ ಸೇರಿದ್ದರು. ತಾಯಿಯ ರೋಧನ ಮುಗಿಲು ಮಟ್ಟುವಂತಿತ್ತು.
ಬಸ್ಸಿನ ಚಾಲಕ ಅಪಘಾತವಾದ ತಕ್ಷಣ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಸ್ಥಳದ ಮಹಜರು ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ತನಿಖೆ ಮುಂದುವರಿದಿದೆ.