ಉಪ್ಪಿನಂಗಡಿ: ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕುಟೇಲು ಸೇತುವೆ ಬಳಿ ಜು.18 ರಂದು ನಡೆದಿದೆ.
ಉಪ್ಪಿನಂಗಡಿ ಕಡೆಯಿಂದ ಹಳೆಗೇಟು ಕಡೆಗೆ ಬರುತ್ತಿದ್ದ ಮಾರುತಿ 800 ಕಾರು ಹಳೆಗೇಟಿನಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಸಿಫ್ಟ್ ಡಿಸೈರ್ ಕಾರಿಗೆ ಡಿಕ್ಕಿಯಾಗಿದೆ. ಸಿಫ್ಟ್ ಡಿಸೈರ್ ಕಾರು ರಸ್ತೆಯಂಚಿನ ತಗ್ಗು ಪ್ರದೇಶಕ್ಕೆ ಮಗುಚಿ ಬಿದಿದ್ದು, ಮಾರುತಿ 800 ಕಾರು ಸಂಪೂರ್ಣ ನಜುಗುಜ್ಜಾಗಿ ರಸ್ತೆಯಲ್ಲಿ ತಿರುಗಿ ನಿಂತಿದೆ.

ಮಾರುತಿ 800 ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸಿಫ್ಟ್ ಡಿಸೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


























